ಗೋರ್ ಬಂಜಾರರಲ್ಲಿ ಸಾಮಾಜಿಕವಾಗಿ ಏಕತೆ ಮೂಡಿಸಿ,

ಜೈ ಗೋರ್ ಜೈ ಸೇವಾಲಾಲ್.

         ಸತ್ಗರು ಸೇವಾಲಾಲ್ ಭಾರತ್ ದೇಶ ವಾಸಿ ಕೊಟ್ಯಂತರ ಗೋರ್ ಬಂಜಾರರನ್ನು ಹುಚ್ಚೆಬ್ಬಿಸುವ ಹುರಿಗೊಳಿಸುವ ಹೆಸರು.ಇನ್ನೂ ಜೋರಾಗಿ ಹೇಳಿದರೆ  ಗೋರ್ ಬಂಜಾರರ ನರ ನಾಡಿಗಳಲ್ಲಿ ಮನೆ ಮನಗಳಲ್ಲಿ ಭಕ್ತಿ ಶಕ್ತಿಯನ್ನು ಚೇತನಗೊಳಿಸುವ ಹೆಸರು.ಹಾಗಾಗಿ ಮಂತ್ರಶಕ್ತಿ,ಚೇತನ ಯುಳ್ಳ ಈ ಹೆಸರನ್ನು ಯಾರು ಯಾವುದಕ್ಕೂ ಯಾವಾಗ ಬೇಕಾ ದರೂ ಬಳಸಿಕೊಳ್ಳಬಹುದು. ಗೋರ್ ಬಂಜಾರರಲ್ಲಿ ಸಾಮಾಜಿಕವಾಗಿ ಏಕತೆ ಮೂಡಿಸಿ,ಸರ್ವ ಕ್ಷೇತ್ರಗಳಲ್ಲಿ  ಅಭಿವೃದ್ಧಿ ಪಥದಲ್ಲಿ ಸಾಗಿಸಲೂ ಮೌಡ್ಯತೆಯ,ಅಂಧವಿಶ್ವಾಸದೆಡೆಗೆ ನೂಕಿ ಪುರೋಹಿತಶಾಹಿ.       ವೈದಿಕಶಕ್ತಿಗಳ ಪಾಪ ಕೂಪಕ್ಕೆ ತಳ್ಳಲು ಸತ್ಗರು ಸೇವಾಭಾಯರ  ಹೆಸರನ್ನು ಉಪಯೋಗಿಸಬಹುದು.   ಆದರೆ ಎಚ್ಚತ್ತ ವಿಚಾರವಂತ ವಿದ್ಯಾವಂತ ಗೋರ್ ಬಾಂಧವರು ಸತ್ಗರು ಸೇವಾಭಾಯರವರನ್ನು ಪುರೋಹಿತಶಾಹಿ ವೈದಿಕಶಾಹಿ ದೇವರ ಜಾಗಕ್ಕೆ ನೂಕದೇ ಗೋರ್ ಮಾಟಿಗಳನ್ನು ಒಗ್ಗೂಡಿಸಲು ಒಂದು     ಪ್ರಬಲ  ಶಸ್ತ್ರ ಗುರಾಣಿಯಾಗಿ ಬಳಸಿಕೊಳ್ಳುವ ಅನಿವಾರ್ಯತೆ ಈಗ ಹೆಚ್ಚು ಹೆಚ್ಚಾಗಿ ಬಂದೊದಗಿದೆ.ಪಕ್ಷ,ಸಿದ್ಧಾಂತ,ಸಂಘಟನೆ,ಸಂಪ್ರದಾಯ. ಧರ್ಮ ಪಂಥಗಳ ಹೆಸರಲ್ಲಿ ಒಡೆದು ಹೋ ಳಾಗಿರುವ ಕೋಟ್ಯಾಂತರ ಮನಸ್ಸುಗಳನ್ನು ಸಮಾಜದಡಿಯಲ್ಲಿ ತಂದು ನಿಲ್ಲಿಸುವ ಪ್ರಬಲ ಶಕ್ತಿ ಸತ್ಗರು ಸೇವಾಲಾಲ್.                      ಗೋರ್ ಬಂಜಾರರ ಮೇಲೆ ವಿಶ್ವ ವ್ಯಾಪಿ ನಿತ್ಯವೂ ನಡೆಯುತ್ತಿರುವ ಸರ್ವ ವಿಧದ ಅನ್ಯಾಯ. ಅವಮಾನ,ಆಕ್ರಮಣ, ದಬ್ಬಾಳಿಕೆಗೆ  ಕೊನೆ ಕಾಣಿಸಿ ಗೌರವಶಾಲಿ ಬದುಕು ಬಾಳಬೇಕಾದರೆ ಗೋರ್ ಭಾಯಿ ಗಳ ಪ್ರತಿ ಮನೆ ಮನಕ್ಕೂ ಶರವೇಗದಲ್ಲಿ ಸೇವಾಲಾಲ್ ಆದರ್ಶ ದ ಗೋರ್ ವಿಚಾರಧಾರೆಯನ್ನ ತಲುಪಿಸುವ ಕಾರ್ಯ ಆಗಬೇಕಿದೇ.ಗೋರ್ ಬಂಜಾರರನ್ನು ತಾಂಡ ಮಟ್ಟದಿಂದ ಗೋರ್ ವಿಚಾರಧಾರೆಯ ಗೋರ್ ಸಾಮಾಜಿಕ ಚಳುವಳಿ, ಆಂಧೋಲನದೊಳು ಭಾಗಿಯಾಗಿ ಸುವ ಮಹತ್ಕಾರ್ಯವಾಗಬೇಕಿದೆ.ಇಲ್ಲದಿದ್ದರೆ ಏಕ ಬೋಲೀ,ಏಕ್ ಲೋಯಿ ಪಾಣಿರ್,ಏಕ್ ನಾತೆ ಗೋತೇರ್,ಏಕ್ ದೇವತಾರಾಧನೆ ಸಂಪ್ರ ಧಾಯ ನಷ್ಟವಾಗಿ ಪಕ್ಷ ಸಂಘ,ಮಥ ಪಂಥಗಳ ಹೆಸರಲ್ಲಿ ಸಹಸ್ರ ಹೊಳಾಗಿ ಜಗತ್ತಿನ ಅತೀ ಪುರಾತನ ಗೋರ್ ಸಂಸ್ಕೃತಿ ಸಮುದಾಯ ನಾಶವಾಗಿ ಸೇವಾಲಾಲ್ ನಮಗೆ ಬರೀ ಸುಂದರ ಸ್ವಪ್ನವಾಗುವುದರಲ್ಲಿ ಯಾ ವುದೇ ಅನುಮಾನವಿಲ್ಲ.                 ಸತ್ಗರು ಸೇವಾಭಾಯ ರವರನ್ನು ಗೋರ್ ಭಾಯಿಗಳ ಆಧರಣೀಯ,ಕ್ರಾಂತಿ ಸಿಂಹ ಎಂದು ಗೌರವಿಸೋಣ.ಪುರೋಹಿತಶಾಹಿ,ಮತಾಂತರ  ಪ್ರಭಾವದಲ್ಲಿ ಗೋರ್ ಸಂಸ್ಕ್ರತಿ ಅವಸಾನ ಹೊಂದುವ ಸಂಸ್ಕ್ರತಿ ಗಳ ಪಟ್ಟಿಯಲ್ಲಿದೆ. ಗೋರ್ ವಿಚಾರಧಾರೆ ಅರಿಯದ ಕೆಲ ಗೋರ್ ಬಂಜಾರ ಯುವಕರು ಎಡ,ಬಲ.ಎಂದು ಎಡಬಿಡಂಗಿಗಳಂತೆ ವರ್ತಿಸು ತ್ತಿದ್ದಾರೆ.(ಕಾಕಾರ್ ಅಕಾಡಾಪರ್ ದವಾಳಿ ಪೂಜತೂ ಆಯೇನೀ. ಸ್ವತಾರ್ ಬಾಪೇರ್ ಆಕಾಡಾ ಚಾಣು.)ತೋನ ಲಾರೇರೋ ಕಾಂಯಿ ಮಾಲಮ್ ಛೇನೀ,ಆಂಗ್ ಕಾಂಯಿ ದೀವೋ ಬಾಳೀಸ್.ಎಂಬ ನಾಣ್ಣುಡಿಯಂತೆ ನಾವೆಲ್ಲ ಬರೀ ಸೇವಾಲಾಲ್ ಸದ್ಭಕ್ತರಾಗಿ,ಗೋರ್ ಸಂಸ್ಕ್ರತಿ ನಿಂತ ನೀರಾಗಿ ಸಮಾಜ ಪ್ರಗತಿಯಿಲ್ಲದೆ ಸರ್ವನಾಶ ದಾರಿಯಲ್ಲಿ ಸಾಗುತ್ತಿದೆ.                  ಸತ್ಗರು ಸೇವಾಲಾಲ್  ಜಾಣೋ.ಛಾಣೋ. ಪಛ್ ಮಾನೋ.ಎಂಬ ವಿಚಾರಧಾರೆಯ ಕ್ರಾಂತಿಯ ಕಿಡಿ ಹಚ್ಚಿ ಕೊಟ್ಟಿದ್ದಾರೆ.ಬರೀ ಅವರ ಹೆಸರಿನ ಲ್ಲಿ  ಮಾಲೆ,ಪಾದಯಾತ್ರ.ಭೋಗ್.ಇಸ್ಟರಿಂದಲೇ ಸಮಾಜದಲ್ಲಿ ಪರಿವರ್ತನೆ  ಆಗುವುದಿಲ್ಲ.ಸೇವಾಲಾಲ್ ಆಶೋತ್ತರಗಳಿಗೆ ಧ್ವನಿಯಾಗಿ,ಅವರ ಅಧೂರೋ ಸಪನೋ “ಗೋರೂರೋ ಗೋರ್ ವಟ್ ರಾಜ್” ತರಲು ಸರ್ವರೂ   ಶ್ರಮಿಸಬೇಕು.                                ಇಂದು ಸೇವಾಲಾಲ್ ಮರಿಯಮ್ಮ ದೇವಾಲಯಗಳಲ್ಲಿ ಭೋಗ್ ಸಂಸ್ಕ್ರುತಿ ಮರೆತು ಅಭಿಷೇಕ,ಹೋಮ,ವ್ರತ ಪೂಜೆ ವೈದಿಕರಿಗೂ ಮೀರಿಸುವಂತ ಆಚರಣೆಗಳ ಕಡು ವಿರೋದಿಯಾಗಿದ್ದರು (ಸತ್ಗರು ವಾಣಿ :-ಕೇನೀ ಭಜೋ ಪೂಜೋ ಮತ್.ಭಜೆ ಪೂಜೆಮ ವೇಳ್ ಫಾಲೇರ್ ಬದಲ್ ಕಾಮ್ ಜವಾದ್ ಕರೋ.ಕಾಮ್ ಕರಣಿತಿ ತಮಾರೋ ಭಲ್ಲೋ ವೀಯ.ಪೂಜಾ ಪಾಟೇತೀ ಕೋನೀ.)ಎಂಬ ವಿಚಾರ ನಾವು ಅರಿಯಬೇಕಿದೆ.                          ಸೇವಾಲಾಲ್ ಕನಸು ಕಂಡಿದ್ದು ಗೋರ್ ಸಮುದಾಯ ಸಂಘಟಿತವಾಗಿ “ಗೋರೂರೋ ಗೋರ್ ವಟ್ ರಾಜ್ “ತರುವ ಬಗ್ಗೆ ಅಮಾಯಕ ಗೋರ್ ಭಾಯಿಗಳಿಗೆ ತಿಳಿಸದೆ ಅನೇಕ ಅವಕಾಶವಾದೀ ಗೋರ್ ಬಂಜಾರ ನಾಯಕರೆನಿಸಿ ಕೊಂಡು ತಮ್ಮ ಹಿತಾಸಕ್ತಿ ಕಾಪಾಡಿ ಕೊಳ್ಳಲು ಸೇವಾಲಾಲ್ ಹೆಸರು.ಸಮಾಜದ ಹೆಸರು ಬಳಸಿಕೊಂಡು ದುಂಡಗಾಗುತ್ತಿ ರುವುದು,ಪುರೋಹಿತ ಶಾಹಿಗಳ ಪಾದ ನೆಕ್ಕುತ್ತಿರುವುದು ನೋಡಿ ಸೇವಾಭಾಯರವರ ಆತ್ಮ ಅಳುಕುತ್ತಿರಬೇಕು.,.

ಅಪಣೋ ಸೋಬತಿ.

ಭೋಜರಾಜ ಎಸ್ ನಾಯಕ್. (ಎಮ್ಎ.ಬಿಇಡಿ.)

ಮುದ್ದನಹಳ್ಳಿ -ತಾಂಡೋ. ಶಿಕಾರಿಪುರ ತಾಲೂಕು. ಶಿವಮೊಗ್ಗ -ಜಿಲ್ಲಾ. 9483641244
ಪ್ರಮುಖ ಪ್ರತಿನೀಧಿ

ರವಿರಾಜ ಸುಭಾಷ ಪವಾರ

ಶಾಂಪೂರಹಳ್ಳಿ ತಾಂಡೊ. ಜೀಲ್ಲಾ, ಕಲಬುರ್ಗಿ.

www.GoarBanjara.com

08976305533

Leave a Reply